ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಹಾಗೂ ಆರ್‌ಎಸ್ಎಸ್ ಮುಖಂಡರ ಸಭೆ ನಿನ್ನೆ (ನ.14) ತಡರಾತ್ರಿವರೆಗೆ ನಡೆದಿದೆ. ಸಂಜೆ 8 :30ಕ್ಕೆ ಮಂಗಳೂರಿಗೆ ಬಂದಿಳಿದ ಅಮಿತ್ ಶಾ ನೇರವಾಗಿ ಮಂಗಳೂರಿನ ಮಣ್ಣಗುಡ್ಡದಲ್ಲಿರುವ ಸಂಘನಿಕೇತನಕ್ಕೆ ತೆರಳಿದರು. ಆರ್ ಎಸ್ಎಸ್ ನ ದಕ್ಷಿಣದ ಶಕ್ತಿಕೇಂದ್ರ ಸಂಘನಿಕೇತನದಲ್ಲಿ ಅಮಿತ್ ಶಾ ಹಾಗೂ ಆರ್ ಎಸ್ಎಸ್ ಪ್ರಚಾರಕ್ ಪ್ರಮುಖರೊಂದಿಗೆ ತಡರಾತ್ರಿ 1 ಗಂಟೆವರೆಗೆ ಸಭೆ ನಡೆದಿದ್ದು, ಸತತ ನಾಲ್ಕು ಗಂಟೆಗಳ ಕಾಲ ಆರ್‌ಎಸ್ಎಸ್ ಮುಖಂಡರ ಜತೆ ಅಮಿತ್ ಶಾ ಚರ್ಚೆ ನಡೆಸಿದ್ದಾರೆ.<br /><br />BJP president Amit Shah and the RSS leaders' meeting took place yesterday late night at sanhga nikethan in Mangalore.
